ಕರ್ನಾಟಕ ಸರ್ಕಾರ
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಯಶವಂತಪುರ ಬೆಂಗಳೂರು

ಪ ತ್ರಿ ಕಾ ಪ್ರ ಕ ಟ ಣೆ

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 2019-20ನೇ, ಸಾಲಿನಲ್ಲಿ ಮಂಡಳಿಗೆ ವಂತಿಗೆ ಪಾವತಿಸುವ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಸಂಘಟಿತ ಕಾರ್ಮಿಕರ ಅರ್ಹ ಮಕ್ಕಳಿಂದ ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯಕ್ಕಾಗಿ ಅರ್ಜಿಗಳನ್ನು ದಿನಾಂಕ :05-09-2019 ರೊಳಗೆ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಹಾಗು ಪ್ರವಾಹದಿಂದಾಗಿ ನಿಗಧಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸಾದ್ಯವಾಗದಿದ್ದು, ಹಾಗು ಇಂಜಿನಿಯರಿಂಗ್ ಮತ್ತು ವೈಧ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಪ್ರಕಟವಾಗದೇ ಇರುವುದಿಂದ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಮತ್ತು ವೈಧ್ಯಕೀಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ :- 30.09.2019 ರವರೆಗೆ ವಿಸ್ತರಿಸಲಾಗಿದೆ.

ಮಂಡಳಿಯ ವೆಬ್ ಸೈಟ್ :www.klwb-kar.com ನಲ್ಲಿ ಅರ್ಜಿ ಡೌನ್ ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಕಲ್ಯಾಣ ಆಯುಕ್ತರು, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, ಕಾರ್ಮಿಕ ಕಲ್ಯಾಣ ಭವನ, ನಂ.48, 2ನೇ ಮಹಡಿ, ಮತ್ತಿಕೆರೆ ಮುಖ್ಯ ರಸ್ತೆ, ಯಶವಂತಪುರ, ಬೆಂಗಳೂರು-560022, ಇವರಿಗೆ ತಲುಪಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಳಾಸಕ್ಕೆ ಅಥವಾ ದೂರವಾಣಿ ಸಂಖ್ಯೆ :080-23570266, ಮೋಬೈಲ್ ಸಂಖ್ಯೆ. 9731343774ಕ್ಕೆ ಸಂಪರ್ಕಿಸಬಹುದಾಗಿದೆ.

ಸಹಿ:-
( ಡಾ|| ಜಿ.ಮಂಜುನಾಥ್ )
ಕಲ್ಯಾಣ ಆಯುಕ್ತರು
ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ,
ಕಾರ್ಮಿಕ ಕಲ್ಯಾಣ ಭವನ, ನಂ.48, 2ನೇ ಮಹಡಿ
ಮತ್ತಿಕೆರೆ ಮುಖ್ಯರಸ್ತೆ, ಯಶವಂತಪುರ, ಬೆಂಗಳೂರು-22

GOVERNMENT OF KARNATAKA
KARNATAKA LABOUR WELFARE BOARD, YESHWANTHPUR, BANGALORE

PRESS NOTE

The Karnataka Labour Welfare Board had invited applications for Educational assistance from the eligible children of Organized sector workers for the year 2019-20.

Due to heavy rain and floods in some districts of the State, the students are unable to apply for scholarship within the due date and also the results of students studying in Engineering and Medical are yet be published, Therefore the Karnataka Labour Welfare Board has extended the application due date upto 30-09-2019.

Applicants can download the application from Board’s Website : www.klwb-kar.com Duly filled in Applications forms to be submitted to Welfare Commissioner, Karnataka Labour Welfare Board, Karmika Kalyana Bhavan, No 48, 2nd Floor, Mathikere Main Road, Yeshwanthpur, Bangalore-560022, Applications forms received after the due date will not be considered. For more details contact PH No: 080-23570266, Mobile No: 9731343774.

(Dr. G. Manjunath)
Welfare Commissioner,
Karnataka Labour Welfare Board,
Karmika Kalyana Bhavan, NO, 48,
2nd floor, Mathikere Main road,
Yeshwanthpur, Bangalore-22