ಮಂಡಳಿ ರಚನೆ

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, 1965 ಮತ್ತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು 1968 ರಂತೆ, ರಾಜ್ಯದಲ್ಲಿಯ ಸಂಘಟಿತ ಕಾರ್ಮಿಕ ವರ್ಗದವರ ಕಲ್ಯಾಣ ಸಂವರ್ಧನೆಗೊಳಿಸಲು, ಹಣಕಾಸು ನೆರವು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸಲು, ಈ ನಿಧಿಯನ್ನು ರಚಿಸಲಾಗಿದೆ.

ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, 1965 ರ ಪ್ರಕರಣ 4 ಹಾಗೂ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಾವಳಿ 1968 ರ ನಿಯಮ 10 ರ ಅನ್ವಯ ಈ ಕೆಳಕಂಡ ಸದಸ್ಯರು/ಪ್ರತಿನಿಧಿಗಳನ್ನು ಒಳಗೊಂಡ ಮಂಡಳಿಯನ್ನು ಸರ್ಕಾರವು ರಚಿಸಿದೆ.

ಸದಸ್ಯರು

1. ಮಾಲೀಕರ ಪ್ರತಿನಿಧಿಗಳು4
2. ಕಾರ್ಮಿಕರ ಪ್ರತಿನಿಧಿಗಳು4
3. ಸ್ವತಂತ್ರ ಸದಸ್ಯರು4
4. ಸ್ವತಂತ್ರ ಮಹಿಳಾ ಪ್ರತಿನಿಧಿಗಳು2

13ನೇ ಮಂಡಳಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಕಾಇ 44 ಎಲ್‍ಇಟಿ 2013, ಬೆಂಗಳೂರು, ದಿನಾಂಕ: 12-12-2016 ರಂದು ಪುನರ್ ರಚಿಸಿ, ದಿನಾಂಕ: 06-03-2017 ಕರ್ನಾಟಕ ರಾಜ್ಯ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುತ್ತದೆ.

ಸ್ವತಂತ್ರ ಸದಸ್ಯರು

1. ಸನ್ಮಾನ್ಯ ಕಾರ್ಮಿಕ ಸಚಿವರು
ಸನ್ಮಾನ್ಯ ಕಾರ್ಮಿಕ ಸಚಿವರು ಹಾಗೂ ಅಧ್ಯಕ್ಷರು, ಕರ್ನಾಟಕ ಕಾರ್ಮಿಕ ಕಲ್ಯಾನ ಮಂಡಳಿ ಬೆಂಗಳೂರು.
2. ಅಪರ ಮುಖ್ಯ ಕಾರ್ಯದರ್ಶಿ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
ಆರ್ಥಿಕ ಇಲಾಖೆ ಅಥವಾ ಅವರ ಪ್ರತಿನಿಧಿಗಳು, ವಿಧಾನ ಸೌಧ, ಬೆಂಗಳೂರು.
3. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
ಕಾರ್ಮಿಕ ಇಲಾಖೆ, ವಿಕಾಸ ಸೌಧ, ಬೆಂಗಳೂರು-01
4. ಕಾರ್ಮಿಕ ಆಯುಕ್ತರು,
ಕಾರ್ಮಿಕ ಇಲಾಖೆ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-29.

ಮಾಲೀಕರ ಪ್ರತಿನಿಧಿಗಳು

1. ಅಧ್ಯಕ್ಷರು, ಫೆಡರೇಷನ್ ಆಫ್ ಕರ್ನಾಟಕ ಛೇಂಬರ್ ಆಫ್ ಕಾಮರ್ಸ್, ಕೆ.ಜಿ. ರಸ್ತೆ, ಬೆಂಗಳೂರು.ಇವರ ಪ್ರತಿನಿಧಿ (ಬೆಂಗಳೂರು ವಿಭಾಗದಿಂದ)
2. ಅಧ್ಯಕ್ಷರು, ಗ್ರೇಟರ್ ಮೈಸೂರು ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, (ಬಿ.ಎಂ.ಸಿ.ಎ.),.ಇವರ ಪ್ರತಿನಿಧಿ (ಮೈಸೂರು ವಿಭಾಗದಿಂದ)
3. ಅಧ್ಯಕ್ಷರು, ಕರ್ನಾಟಕ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ (ಕಾಸಿಯಾ), ಇವರ ಪ್ರತಿನಿಧಿ (ಕಲಬುರಗಿ ವಿಭಾಗದಿಂದ).
4. ಅಧ್ಯಕ್ಷರು, ಕರ್ನಾಟಕ ಟೆಕ್ಸ್ಟ್ಟೈಲ್ಸ್ ಮಿಲ್ಸ್ ಅಸೋಸಿಯೇಷನ್, ಇವರ ಪ್ರತಿನಿಧಿ (ಬೆಳಗಾವಿ ವಿಭಾಗದಿಂದ)

ಕಾರ್ಮಿಕ ಪ್ರತಿನಿಧಿಗಳು

1. ಅಧ್ಯಕ್ಷರು, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ನಂ. 3, ವಿನಾಯಕ ಬಿಲ್ಡಿಂಗ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-3. ಇವರ ಪ್ರತಿನಿಧಿ (ಬೆಂಗಳೂರು ವಿಭಾಗದಿಂದ)
2. ಅಧ್ಯಕ್ಷರು, ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್, ಕರ್ನಾಟಕ ರಾಜ್ಯ ಸಮಿತಿ, ನಂ. 20/1, ವಿ.ಜಿ. ಗೋಪಾಲ್ ಬಿಲ್ಡಿಂಗ್, ಲಾಲ್ ಬಾಗ್ ಫೋರ್ಟ್ ರಸ್ತೆ, ಮಿನರ್ವ ಸರ್ಕಲ್ ಹತ್ತಿರ, ಬೆಂಗಳೂರು-04 ಇವರ ಪ್ರತಿನಿಧಿ (ಮೈಸೂರು ವಿಭಾಗದಿಂದ)
3. ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಇಂಟೆಕ್), ನಂ.26/1, 11ನೇ ಕ್ರಾಸ್, 8ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು ಇವರ ಪ್ರತಿನಿಧಿ (ಕಲಬುರಗಿ ವಿಭಾಗದಿಂದ)
4. ಅಧ್ಯಕ್ಷರು, ಭಾರತೀಯ ಮಜ್ದೂರ ಸಂಘ, ಸುಭೇದಾರ್ ಛತ್ರಂ ರಸ್ತೆ, ಬೆಂಗೂರು ಇವರ ಪ್ರತಿನಿಧಿ (ಬೆಳಗಾವಿ ವಿಭಾಗದಿಂದ)

ಮಹಿಳಾ ಸದಸ್ಯರು

1. ಶ್ರೀಮತಿ. ಎಂ ಎಸ್ ಮಂಜುಳಾ ಬಿನ್ ಲೇಟ್ ಶಾಂತಾನಂದ ಎಂ.ಎನ್.,
ನಂ:26, 1ನೇ ಕ್ರಾಸ್, ರಾಜ್ಯೋತ್ಸವ ನಗರ, ವಾರ್ಡ್ ನಂ: 14, ರೂಪನಗುಡಿ ರಸ್ತೆ, ಬಳ್ಳಾರಿ
2. ಶ್ರೀಮತಿ. ನಳಿನಿ ರಘು,
ನಂ: 204. ಆರ್ಯನ್ ಬಾಸಿಲ್, ವಿ.ನಾಗನಹಳ್ಳಿ ಮುಖ್ಯರಸ್ತೆ, ಗುಡ್ಡಹಳ್ಳಿ, ಆರ್.ಟಿ ನಗರ, ಬೆಂಗಳೂರು 32

ಕಲ್ಯಾಣ ಆಯುಕ್ತರು ಮಂಡಳಿಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾಗಿರುತ್ತಾರೆ.

  • 2017-18 ನೇ ಸಾಲಿನಲ್ಲಿ 13ನೇ ಮಂಡಳಿಯನ್ನು ದಿನಾಂಕ 12-12-2016 ರಂದು ಪುನರ್ ರಚಿಸಿ, ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ವಿಶೇಷ ಪತ್ರಿಕೆ ದಿನಾಂಕ: 06-03-2017. ರಂದು ಪ್ರಕಟಿಸಲಾಗಿದೆ.
  • 2018-19ನೇ ವರ್ಷದಲ್ಲಿ ದಿನಾಂಕ 07-06-2019 ರಂದು 89ನೇ ಮಂಡಳಿ ಸಭೆಯನ್ನು ನಡೆಸಲಾಗಿದೆ.