ಕಾರ್ಮಿಕ ಕಲ್ಯಾಣ ಮಂಡಳಿ ಚಟುವಟಿಕೆಗಳು

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕೆ ಹಣಕಾಸು ನೆರವು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಒಂದು ನಿಧಿಯನ್ನು, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965 ರಡಿಯಲ್ಲಿ ಸ್ಥಾಪಿಸಲಾಗಿದೆ. ಮಂಡಳಿಗೆ ವಂತಿಗೆ ಪಾವತಿಸುವ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಅವರ ಅವಲಂಬಿತರು ಮತ್ತು ಕಾರ್ಮಿಕರ ಮಕ್ಕಳ ಕ್ಷೇಮಾಭಿವೃದ್ಧಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಯೋಜನೆಗಳು ಜಾರಿಯಲ್ಲಿರುತ್ತದೆ.

1. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ:

ಪರಿಷ್ಕøತ
(2017-18ನೇ ಸಾಲಿನಿಂದ)
ಪ್ರೌಢ ಶಾಲೆ (8 ರಿಂದ 10ನೇ ತರಗತಿವರೆಗೆ)ರೂ. 1500/- ರೂ. 3,000/-
ಪಿ.ಯು.ಸಿ/ಡಿಪ್ಲೊಮಾ/ಐಟಿಐ/ಡಿ.ಇಡಿ ಇತ್ಯಾದಿರೂ. 2000/- ರೂ. 4,000/-
ಪದವಿ ತರಗತಿಗೆರೂ. 2,200/- ರೂ. 5,000/-
ಸ್ನಾತಕೋತ್ತರ ಪದವಿ ತರಗತಿಗಳಿಗೆರೂ. 3,000/- ರೂ. 6,000/-
ಇಂಜಿನೀಯರಿಂಗ್/ವೈದ್ಯಕೀಯರೂ. 5,000/- ರೂ. 10,000/-

2. ಕಾರ್ಮಿಕರಿಗೆ ವೈದ್ಯಕೀಯ ನೆರವು ಹೃದಯ ಶಸ್ತ್ರಚಿಕಿತ್ಸೆ, ಕಿಡ್ನಿ ಟ್ರಾನ್ಸ್ಪ್ಲಾಂಟೇಷನ್, ಕ್ಯಾನ್ಸರ್, ಆಂಜಿಯೋಪ್ಲಾಸ್ಟಿ, ಕಣ್ಣು, ಅರ್ಥೊಪೆಡಿಕ್, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಗಾಲ್ ಬ್ಲಾಡರ್ ತೊಂದರೆ, ಮೆದುಳಿನ ರಕ್ತಸ್ರಾವ ಚಿಕಿತ್ಸೆಗೆ ರೂ. 1,000 ರಿಂದ 10,000 ವರೆಗೆ ಮತ್ತು ಆರೋಗ್ಯ ತಪಾಸಣೆಗೆ ರೂ. 500 ರಿಂದ ರೂ. 1000 ಗಳವರೆಗೆ ಧನ ಸಹಾಯ ನೀಡಲಾಗುವುದು.

3. ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಗಣಕಯಂತ್ರ ತರಬೇತಿ: ಉದ್ಯೋಗ ಮತ್ತು ತರಬೇತಿ ಇಲಾಖೆ ಸಹಯೋಗದೊಂದಿಗೆ ತರಬೇತಿ ನೀಡಲಾಗುವುದು. ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದು 18-40 ವಯೋಮಿತಿಯಲ್ಲಿರಬೇಕು. ಕುಟುಂಬದಲ್ಲಿ ವರ್ಷಕ್ಕೆ ಇಬ್ಬರಿಗೆ ತರಬೇತಿ ಸೌಲಭ್ಯ ನೀಡಲಾಗುವುದು.

4. ಅಂಗವಿಕಲ ಕಾರ್ಮಿಕರಿಗೆ ತ್ರಿಚಕ್ರ ಸೈಕಲ್ ಖರೀದಿಸಲ ಧನ ಸಹಾಯ : ಅಂಗವಿಕಲ ಕಾರ್ಮಿಕರಿಗೆ ತ್ರಿಚಕ್ರ ಸೈಕಲ್ ಖರೀದಿಸಲು ರೂ. 7,500/- ಗಳ ಧನ ಸಹಾಯ ನೀಡಲಾಗುವುದು.

5. ಅಂಗವಿಕಲ ಕಾರ್ಮಿಕರಿಗೆ ಧನ ಸಹಾಯ ಕಾರ್ಮಿಕರಿಗೆ ಕೆಲಸದ ವೇಳೆಯಲ್ಲಿ ಅಪಘಾತವಾದಲ್ಲಿ ಕನಿಷ್ಠ ರೂ. 1000 ಗರಿಷ್ಠ ರೂ. 3000 ಗಳವರೆಗೆ ಧನ ಸಹಾಯ ನೀಡಲಾಗುವುದು. ಸೌಲಭ್ಯ ಪಡೆಯುವ ಕಾರ್ಮಿಕರು ಅಪಘಾತವಾದ 3 ತಿಂಗಳೊಳಗೆ ಅರ್ಜಿ ಸಲ್ಲಿಸತಕ್ಕದ್ದು. ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಕಾರ್ಮಿಕ ನಷ್ಠ ಪರಿಹಾರ ಕಾಯ್ದೆ, ಉದ್ಯೋಗ ಸಂಸ್ಥೆ ಮತ್ತು ಬೇರೆ ಯಾವುದೇ ಮೂಲದಿಂದ ಧನ ಸಹಾಯ ಪಡೆದಿರಬಾರದು.

6. ಅಂಗವಿಕಲ ಕಾರ್ಮಿಕರಿಗೆ ಕೃತಕ ಅಂಗಸಾಧನ ಖರೀದಿಸಲು ಧನ ಸಹಾಯ ಇ.ಎಸ್.ಐ ಕಾರ್ಮಿಕ ನಷ್ಠ ಪರಿಹಾರ ಕಾಯ್ದೆ ಅಥವಾ ಬೇರಾವುದೇ ಧನ ಸಹಾಯ ಪಡೆದಿರಬಾರದು. ಕೃತಕ ಅಂಗ ಸಾಧನ ಖರೀದಿಸಲು ರೂ. 1000 ದಿಂದ ರೂ. 5000 ವರೆಗೆ ನೀಡಲಾಗುವುದು.

ಈ ಕೆಳಗಿನ ಯೋಜನೆಗೆ ಮಾಸಿಕ ಸಂಬಳದ ಮಿತಿಯಿರುವುದಿಲ್ಲ, ವಯೋಮಿತಿ 18-60

1. ವಾರ್ಷಿಕ ವೈಧ್ಯಕೀಯ ತಪಾಸಣೆಯನ್ನು ನಡೆಸುವ ಟ್ರೇಡ್ ಯೂನಿಯನ್/ಸಂಸ್ಥೆಗಳಿಗೆ ಧನಸಹಾಯ: ನೋಂದಾಯಿತ ಕಾರ್ಮಿಕ ಸಂಘಟನೆಗಳು/ಸರ್ಕಾರೇತರ ಸಂಸ್ಥೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೋಂದಿಗೆ ನಡೆಸುವ ಶಿಬಿರದಲ್ಲಿ ಭಾಗವಹಿಸುವ ಕಾರ್ಮಿಕರ ಗರಿಷ್ಠ ಮಿತಿ ಹಾಗೂ ನೀಡುವ ಚಿಕಿತ್ಸಾ ಕ್ರಮವನ್ನು ಆಧರಿಸಿ ರೂ. 30,000 ಗಳವರೆಗೆ ಧನ ಸಹಾಯ ನೀಡಲಾಗುವುದು. ಒಂದು ಸಂಘಟನೆಗೆ ವರ್ಷದಲ್ಲಿ ಒಂದು ಬಾರಿ ಮಾತ್ರ ಈ ಸೌಲಭ್ಯ ನೀಡಲಾಗುವುದು. (ಯಾವುದೇ ಮೂಲದಿಂದ ವೈದ್ಯಕೀಯ ಸೌಲಭ್ಯ ಪಡೆಯದಿರುವ ಉದ್ಯೋಗ ಸಂಸ್ಥೆಯ ಕಾರ್ಮಿಕರಿಗೆ ನಡೆಸುವ ಆರೋಗ್ಯ ತಪಾಸಣೆ ಶಿಭಿರಕ್ಕೆ ಧನ ಸಹಾಯ ನೀಡಲಾಗುವುದು)

2. ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ನೊಂದಾಯಿತ ಕಾರ್ಮಿಕ ಸಂಘಗಳಿಗೆ ಧನಸಹಾಯ: ನೋಂದಾಯಿತ ಕಾರ್ಮಿಕ ಸಂಘಟನೆಗಳು ಕಲ್ಯಾಣ ಆಯುಕ್ತರ ಪೂರ್ವಾನುಮತಿಯೊಂದಿಗೆ ವಾರ್ಷಿಕ ಕ್ರೀಡಾ ಚಟುವಟಿಕೆ ಹಮ್ಮಿಕೊಂಡಲ್ಲಿ ರೂ. 50,000 ವರೆಗೆ ಧನ ಸಹಾಯ ನೀಡಲಾಗುವುದು. ವರ್ಷದಲ್ಲಿ ಒಂದು ಸಂಘಟನೆಗೆ ಒಂದು ಬಾರಿ ಮಾತ್ರ ಈ ಸೌಲಭ್ಯ ನೀಡಲಾಗುವುದು. (ಯಾವುದೇ ಮೂಲದಿಂದ ಕ್ರೀಡಾ ಚಟುವಟಿಕೆಗೆ ಧನ ಸಹಾಯ ದೊರೆಯದಿದ್ದಲ್ಲಿ ಅಂತಹ ಉದ್ಯೋಗ ಸಂಸ್ಥೆಯ ಕಾರ್ಮಿಕರಿಗೆ ನಡೆಸುವ ಕ್ರೀಡಾ ಚಟುವಟಿಕೆಗೆ ಧನ ಸಹಾಯ ನೀಡಲಾಗುವುದು)

3. ಮೃತ ಕಾರ್ಮಿಕನ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ: ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಕಾರ್ಮಿಕ ನಷ್ಠ ಪರಿಹಾರ ಕಾಯ್ದೆ, ಉದ್ಯೋಗ ಸಂಸ್ಥೆ, ಮತ್ತು ಬೇರೆ ಯಾವುದೇ ಮೂಲದಿಂದ ಧನ ಸಹಾಯ ಪಡೆಯದೆ ಮೃತರ ಅವಲಂಬಿತರು ಕಾರ್ಮಿಕ ಮೃತ ಪಟ್ಟ 6 ತಿಂಗಳೊಳಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿದಲ್ಲಿ, ರೂ. 5000 ಗಳನ್ನು ನೀಡಲಾಗುವುದು.

4. ಹಿಮೋಫೀಲಿಯಾ ನ್ಯೂನತೆಯಿಂದ ಬಳಲುತ್ತಿರುವ ಕಾರ್ಮಿಕರು: ನೋಂದಾಯಿತ ಹಿಮೋಫೀಲಿಯಾ ಸೊಸೈಟಿಗಳಿಂದ ಚಿಕಿತ್ಸೆ ಪಡೆದುಕೊಂಡಲ್ಲಿ ಅಂತಹ ಸೊಸೈಟಿಗಳಿಗೆ ರೂ. 5000 ಧನ ಸಹಾಯ ನೀಡಲಾಗುವುದು. ಇಂತಹ ಸೊಸೈಟಿಗಳು ಬೆಂಗಳೂರು, ಮಣಿಪಾಲ್ ಮತ್ತು ದಾವಣಗೆರೆಯಲ್ಲಿ ಲಭ್ಯವಿರುವುದು.

5. ಸಮುದಾಯ ಭವನ ಪೀಣ್ಯ 1ನೇ ಹಂತ ಆಂಜನೇಯ ದೇವಸ್ಥಾನದ ಎದುರು ಬೆಂಗಳೂರು, ಮೈಸೂರು ರಸ್ತೆಯ ಬಾಪೂಜಿನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಸಮುದಾಯ ಭವನ, ಸಿಂದಗಿ ರಸ್ತೆ, ಬಿಜಾಪುರ ಮತ್ತು ಗದಗ ನಗರ ಸಟಲ್‍ಮೆಂಟ್ ಏರಿಯಾದಲ್ಲಿರುವ ಸಮುದಾಯ ಭವನಗಳನ್ನು ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವಿವಾಹ ಮತ್ತು ಶುಭ ಸಮಾರಂಭಗಳಿಗೆ ರಿಯಾಯತಿ ದರದಲ್ಲಿ ಬಾಡಿಗೆಗೆ ನೀಡಲಾಗುವುದು.

ಸೂಚನೆ: ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ 5 ಶಾಸನ 2016, ಬೆಂಗಳೂರು ದಿನಾಂಕ: 06-04-2017 ರ ಪ್ರಕಾರ ಪ್ರತಿ ವರ್ಷ ಜನವರಿ 15 ರೊಳಗೆ ಕಾರ್ಮಿಕರು ಮತ್ತು ಮಾಲೀಕರು ಹಾಗೂ ಸರ್ಕಾರ ರೂ. 20 : 40 : 20 ರಂತೆ ಒಬ್ಬ ಕಾರ್ಮಿಕನಿಗೆ ವಂತಿಕೆಯನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಪಾವತಿಸತಕ್ಕದ್ದು.