ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಗೆ ಸ್ವಾಗತ

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965 ನ್ನು 1965 ರ ಜುಲೈ 08 ರ ದಿನಾಂಕದಂದು ರಾಷ್ಟ್ರಪತಿಯವರಿಂದ ಅನುಮೋದನೆಗೊಂಡಿರುತ್ತದೆ.

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕೆ ಹಣಕಾಸು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಒಂದು ನಿಧಿಯನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.

ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಗೆ ವಂತಿಕೆ ಪಾವತಿ ಮಾಡುವ ಕಾರ್ಖಾನೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕ ಮತ್ತು ಅವರ ಅವಲಂಬಿತರಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಅವುಗಳಲ್ಲಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ಗಣಕ ಯಂತ್ರ ತರಬೇತಿ, ಕಾರ್ಮಿಕರಿಗೆ ವೈಧ್ಯಕೀಯ ನೆರವು, ಅಂಗವಿಕಲ ಕಾರ್ಮಿಕರಿಗೆ ತ್ರೀ ಚಕ್ರ ಸೈಕಲ್, ಕಾರ್ಮಿಕರ ಅಪಘಾತ ಧನ ಸಹಾಯ, ಕೃತಕ ಅಂಗ ಸಾಧನ ಖರೀದಿಸಲು ಧನ ಸಹಾಯ ಕಾರ್ಮಿಕರು ನಡೆಸುವ ವಾರ್ಷಿಕ ಕ್ರೀಡಾ ಚಟುವಟಿಕೆ, ಆರೋಗ್ಯ ತಪಾಸಣೆ ಶಿಬಿರಕ್ಕೆ ಧನ ಸಹಾಯ, ಮೃತ ಕಾರ್ಮಿಕ ಅಂತ್ಯ ಸಂಸ್ಕಾರಕ್ಕೆ ಧನ ಸಹಾಯ ಇಂತಹ ಹಲವು ಯೋಜನೆಗಳಡಿಯಲ್ಲಿ ಕಾರ್ಮಿಕರಿಗೆ ಸೌಲಭ್ಯ ನೀಡಲಾಗುತ್ತಿದೆ.

ಮಂಡಳಿಯ ಸಂಕ್ಷಿಪ್ತ ಎಲ್ಲಾ ಮಾಹಿತಿಗಳನ್ನು ಮತ್ತು ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಕಾರ್ಮಿಕ ಮತ್ತು ಅವರ ಅವಲಂಬಿತರಿಗೆ ಸುಲಭವಾಗಿ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ 1965 ಮತ್ತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು 1968, ಮಂಡಳಿಯ ನಡವಳಿಗಳು, ಮಂಡಳಿಯ ರಚನೆ, ಅಧಿಕಾರಿಗಳ ಕರ್ತವ್ಯಗಳು ಹಾಗೂ ಜವಾಬ್ದಾರಿಗಳು, ಮಂಡಳಿಯ ಆಯವ್ಯಯ, ಸಿಬ್ಬಂದಿ ವಿವರಗಳು ಮತ್ತು ಮಾಹಿತಿ ಹಕ್ಕು ಕಾಯ್ದೆಯಡಿ ಇತ್ಯಾದಿ ವಿವರಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಂಡಳಿಯ ಅಂತರ್ಜಾಲ ತಾಣ (website: http://www.klwb-kar.com) ದಲ್ಲಿ ಒದಗಿಸಲಾಗಿದೆ.